ಜಾಂಬಿಯಾ ವಿದ್ಯಾರ್ಥಿ ಸಾವು ಪ್ರಕರಣ: ಆತ್ಮಹತ್ಯೆ ಶಂಕೆ ಎಂದ ಸುಷ್ಮಾ ಸ್ವರಾಜ್

ಜಾಂಬಿಯಾ ವಿದ್ಯಾರ್ಥಿ ಸಾವು ಪ್ರಕರಣ: ಆತ್ಮಹತ್ಯೆ ಶಂಕೆ ಎಂದ ಸುಷ್ಮಾ ಸ್ವರಾಜ್
ನವದೆಹಲಿ: ಗುಜರಾತ್ ರಾಜ್ಯದಲ್ಲಿ ಸಾವನ್ನಪ್ಪಿದ ಜಾಂಬಿಯಾ ವಿದ್ಯಾರ್ಥಿ ಪ್ರಕರಣವೊಂದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ.
ಜಾಂಬಿಯಾ ಪ್ರಜೆ ಯೈಟ್ ಶಕಲಾ ಅವರ ಸಾವು ಪ್ರಕರಣ ಸಂಬಂಧ ಈಗಾಗಲೇ ಗುಜರಾತ್ ರಾಜ್ಯ ಸರ್ಕಾರದಿಂದ ನಾನು ವರದಿಯನ್ನು ಪಡೆದುಕೊಂಡಿದ್ದೇನೆ. ವರದಿಯನ್ನು ಪರಿಶೀಲಿಸಿದರೆ ಇದೊಂದು ಆತ್ಮಹತ್ಯೆ ಪ್ರಕರಣವಾಗಿದೆ ಎಂಬ ಶಂಕೆಗಳು ಮೂಡತೊಡಗಿವೆ ಎಂದು ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ಸಂಬಂಧ ಗುಜರಾತ್ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ವಿದ್ಯಾರ್ಥಿ ಸಾವನ್ನಪ್ಪಿದ್ದ ಸ್ಥಳದಲ್ಲಿ ಡೆತ್ ನೋಟ್ ಕೂಡ ದೊರಕಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ರಾಜ್ಯದ ವಡೋದರಾದಲ್ಲಿ ಎರಡನೇ ವರ್ಷದ ಇಂಜಿನಿರಿಂಗ್ ಮಾಡುತ್ತಿದ್ದ, ಜಾಂಬಿಯಾ ಪ್ರಜೆಯೊಬ್ಬರ ಮೃತ ದೇಹ ಕೆಲ ದಿನಗಳ ಹಿಂದಷ್ಟೇ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Share this post