ಗದಗದ ದಲಿತನ ಮನೆಯಲ್ಲಿ ಮಂಡಕ್ಕಿ, ಉಪ್ಪಿಟ್ಟು, ಚಹಾ ಸವಿದ ಬಿಎಸ್ ವೈ

ಗದಗದ ದಲಿತನ ಮನೆಯಲ್ಲಿ ಮಂಡಕ್ಕಿ, ಉಪ್ಪಿಟ್ಟು, ಚಹಾ ಸವಿದ ಬಿಎಸ್ ವೈ

ಗದಗ, ಮೇ 23 : ಜನಸ೦ಪರ್ಕ ಅಭಿಯಾನ ಕೈಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮಂಗಳವಾರ ಗದಗ ಜಿಲ್ಲೆಯ ಶಿಗ್ಲಿಯ ಅಂಬೇಡ್ಕರ್ ನಗರದ ದಲಿತನ ಮನೆಯೊಂದರಲ್ಲಿ ತಿ೦ಡಿ ಸವಿದರು.
ಬಿಎಸ್ ವೈ ಮಂಗಳವಾರ ಗದಗ ಜಿಲ್ಲೆಯ ಶಿಗ್ಲಿಯ ಅಂಬೇಡ್ಕರ್ ನಗರದ ಫಕೀರವ್ವ ಮುದುಕಪ್ಪ ಮಲ್ಲಣ್ಣನವರ್ ಎನ್ನುವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು.ಈ ಮೂಲಕ ದಲಿತರ ಮನೆಯಲ್ಲಿ ಊಟ ಮಾಡದೇ ಹೋಟೆಲ್ ತಿಂಡಿ ತಿಂದಿದ್ದಾರೆಂದು ಟೀಕೆ ಮಾಡಿದ್ದವರ ಬಾಯಿ ಮುಚ್ಚಿಸಿದರು. [ದಲಿತರ ಮನೇಲಿ ಹೋಟೆಲ್ ತಿಂಡಿ ತಿಂದ ಬಿಎಸ್ವೈ ವಿರುದ್ಧ ದೂರು]
ಯಡಿಯೂರಪ್ಪನ೦ಥ ದೊಡ್ಡ ನಾಯಕರು ನಮ್ಮ ಮನೆಗೆ ಬ೦ದು ನಾವು ಮಾಡಿದ ಚಹಾ, ಮಂಡಕ್ಕಿ, ಉಪ್ಪಿಟ್ಟು ತಿ೦ಡಿ ತಿ೦ದದ್ದು ನಮಗೆ ಅತೀವ ಸ೦ತಸ, ಹೆಮ್ಮೆ ತ೦ದಿದೆ ಎಂದು ಫಕೀರವ್ವ ಮುದುಕಪ್ಪ ಮಲ್ಲಣ್ಣನವರ್ ಸಂತಸ ವ್ಯಕ್ತಪಡಿಸಿದರು.
ಮೊನ್ನೆ ಅಷ್ಟೇ ಕೆಳಕೋಟೆಯಲ್ಲಿ ರುದ್ರಮುನಿ ಎಂಬ ದಲಿತ ಬಿಜೆಪಿ ನಾಯಕನ ಮನೆಗೆ ಯಡಿಯೂರಪ್ಪ ಮತ್ತಿತರರು ಭೇಟಿ ನೀಡಿದಾಗ ಆತ ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಿನ್ನದೆ, ಹೋಟೆಲಿನಿಂದ ತರಿಸಿದ ಇಡ್ಲಿ, ವಡಾ, ಚಟ್ನಿ, ಸಾಂಬಾರ್ ಸೇವಿಸಿದ್ದರೆಂಬುದು ಅವರ ಮೇಲಿನ ಆರೋಪ ಕೇಳಿ ಬಂದಿತ್ತು. ಇದಕ್ಕೆ ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು.
ಇದ್ಯಾವುದಕ್ಕೆ ಕಿವಿಗೊಡದ ಬಿಎಸ್ ವೈ ಮತ್ತೆ ದಲಿತನ ಮನೆಯೊಂದರಲ್ಲಿ ಉಪಹಾರ ಸೇವಿಸಿದರು.

Share this post