ಮಹಾ ಸೋಮಾರಿ ಭಾರತ!

ಮಹಾ ಸೋಮಾರಿ ಭಾರತ!


ನವದೆಹಲಿ, ಜು. 14- ಸ್ವಲ್ಪ ದೂರ ನಡೆಯುವುದಕ್ಕೇ ನಡೆಯುವುದೇ ಅಥವಾ
ಕಾರನ್ನು ಬಳಸುವುದೆ? ಎಂದು ಯೋಚಿಸಿ
ಕೊನೆಗೆ ಕಾರನ್ನೇ ಬಳಸುವ ಭಾರತೀಯರು
ನಡೆಯುವುದರಲ್ಲಿ ಸೋಮಾರಿಗಳಾಗಿದ್ದಾರೆ.
ನಡಿಗೆಗೆ ಸಂಬಂಧಿಸಿದಂತೆ ಇತ್ತೀಚೆಗೆ
ನಡೆಸಲಾಗಿರುವ ಅಧ್ಯಾಯನದಿಂದ
ಹೊರಹೊಮ್ಮಿರುವ ಜಗತ್ತಿನ 46 ಸೋಮಾರಿ ದೇಶಗಳಲ್ಲಿ ಭಾರತವೂ
ಒಂದಾಗಿದೆ.ಜನರು ದಿನಕ್ಕೆ 4297
ಹಜ್ಜೆಗಳಷ್ಟೇ ನಡೆಯುವ ದೇಶಗಳಲ್ಲಿ
ಭಾರತ 39ನೇ ಶ್ರೇಣಿಯಲ್ಲಿದೆ.
ಜಗತ್ತಿನಾದ್ಯಂತದಿಂದ 46 ದೇಶಗಳ
ಸುಮಾರು 700000 ಜನರ ನಡಿಗೆಯ
ಕ್ರಮವನ್ನು ಸ್ಮಾಟ್‍ಫೋನ್ ಮುಖೇನ
ಸ್ಥಾಪಿಸಲಾದ ನಡಿಗೆ ಕೌಂಟರ್‍ಗಳ ಮೂಲಕ
ಸ್ಟ್ಯಾಂಡ್‍ಫೊರ್ಡ್ ವಿಶ್ವ ವಿದ್ಯಾಲಯ
ನಡೆಸಿರುವ ಶೋಧನೆಯಿಂದ ಈ ವಿಚಾರ
ಹೊರಬಿದ್ದಿದೆ. ಅಧ್ಯಾನ ಕುರಿತಂತೆ
ಪ್ರಕಟಿಸಿಲಾಗಿರುವ ಲೇಖನದಲ್ಲಿನಡಿಗೆಯಲ್ಲಿ
ಅತ್ಯಂತ ಸೋಮಾರಿಯಾದ ಇತ್ತೀಚೆಗಿನ
ದೇಶವೆಂದರೆ ಚೀನಾದವರಾಗಿದ್ದು ಅದರಲ್ಲೂ
ಹಾಂಗ್‍ಕಾಂಗ್‍ನಲ್ಲಿರುವ ಜನರು ದಿನಕ್ಕೆ
ಕೇವಲ 6880 ಹೆಜ್ಜೆ ನಡೆಯತ್ತಾರೆ
ಎಂದು ಉಲ್ಲೇಖಿಸಲಾಗಿದೆ.
ಅತ್ಯಂತ ಸೋಮರಿ ದೇಶವೆಂದರೆ ಇಂಡೋನೆಷಿಯಾ
ಆಗಿದ್ದು ಅವರದು
ಚೀನಾದವರಿಗಿಂತ
ಅರ್ಧ ನಡಿಗೆ-
ಯಾಗಿದೆ. ಅವರು
ಸರಾಸರ ದಿನಕ್ಕೆ 3513
ಹೆಜ್ಜೆ ನಡೆಯುತ್ತಾರೆ.
ಅಮೇರಿಕಾದವರ
ನಡಿಗೆ ಸರಾಸರಿ
6000 ಹೆಜ್ಜೆಯಾದರೆ
ಜಗತ್ತಿನಾದ್ಯಾಂತ ದಿನಕ್ಕೆÀ ಸರಾಸರಿ 4961
ಹೆಜ್ಜೆ ನಡೆಯಲಾಗುತ್ತದೆ. ಈ ಪಟ್ಟಿಯ
ಮೊದಲಾರ್ಧದ ಮೇಲಿನ ಶ್ರೇಣಿಯಲ್ಲಿರುವ
ದೇಶಗಳಲ್ಲಿ ಹಾಂಗ್ ಹಾಂಗ್, ಚೀನಾ,
ಉಕ್ರೇನ್ ಮತ್ತು ಜಪಾನ್ ದೇಶಗಳು
ಸೇರುತ್ತವೆ. ದಿನಕ್ಕೆ 6000 ಹೆಜ್ಜೆ ನಡಿಗೆ
ಮಾಡುವ ದ್ವಿತೀಯಾರ್ಧ ದೇಶಗಳಲ್ಲಿ
ಪಟ್ಟಿಯಲ್ಲಿ ಮಲೇಷಿಯಾ ಮತ್ತು ಸೌದಿ
ಅರೆಬಿಯಾಗಳಿವೆ. ಇಂಡೋನೆಸಿಯಾದಲ್ಲಿ
ಜನರು 3900 ಹೆಜ್ಜೆಗಳಿಗೂ ಕಡಿಮೆ ನಡೆಯುತ್ತಾರೆ.

Share this post