ಈ ಶತಮಾನ ಏಷಾ ಈ ಶತಮಾನ ಏಷ್ಯಾದ್ದು ಆಚರಣೆ ಯಾವುದೇ ಇರಲಿ ನಮ್ಮ ಸಂಸ್ಕೃತಿ ಮೀರದಿರಲಿ- ಪ್ರಧಾನಿ

New Delhi: Prime Minister Narendra Modi addresses the inaugural function of the Rajasva Gyan Sangam – Annual Conference of Tax Administrators, in New Delhi on Friday. PTI Photo/PIB(PTI9_1_2017_000118B)

ನವದೆಹಲಿ, ಆ. 11 – ‘ವಂದೇ ಮಾತರಂ’ ವಿರೋಧಿಸುವವರು ವಂದೇ ಮಾತರಂ ಹೇಳಲಿ, ಬಿಡಲಿ ಆದರೆ, ದೇಶದ ನೆಲ, ಜಲವನ್ನು ಮಾಲಿನ್ಯಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ವಂದೇ ಮಾತರಂ’ ಹೇಳುವುದು ಕೆಲವರಿಗೆ ಇಷ್ಟವಿಲ್ಲ ಆದರೆ, ನನಗೆ ಸೇರಿದಂತೆ ಅನೇಕರಿಗೆ ವಂದೇ ಮಾತರಂ ಕೇಳುತ್ತಿದ್ದಂತೆ ಹೃದಯ
ಹಿಗ್ಗಿ ಬರಲಿದೆ ಎಂದು ಹೇಳಿದರು. ದೇಶದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವವರೇ ನಿಜವಾದ ಸಂತರು. ಅವರು ಭಾರತ ಮಾತೆಯ ವರಪುತ್ರರು. ದೇಶದ ಎಲ್ಲಾ ಜನರು ಸ್ವಚ್ಛತೆ ಕಾಪಾಡುವ ಕಡೆಗೆ ಆಧ್ಯತೆ ನೀಡಬೇಕು. ಸ್ವಾಮಿ ವಿವೇಕಾ ನಂದ ಅವರು ಬದುಕಿದ್ದರೆ ಗಂಗಾನದಿ ಮಾಲಿನ್ಯವಾಗಲು ಬಿಡುತ್ತಿರಲಿಲ್ಲ ಎಂದು ಹೇಳಿದರು.
ಅಮೆರಿಕದ ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನ ವನ್ನುದ್ದೇಶಿಸಿ ಸ್ವಾಮಿ ವಿವೇಕಾನಂದ ಅವರು ಮಾಡಿದ ಭಾಷಣದ 125ನೇ ವರ್ಷಾಚರಣೆ ಹಾಗೂ ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ ಅವರ ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ‘ಯಂಗ್ ಇಂಡಿಯಾ, ನ್ಯೂ ಇಂಡಿಯಾ’ ಸಮಾವೇಶದಲ್ಲಿ ದೇಶದ ಯುವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, ನಿತ್ಯದ ಜೀವನದಲ್ಲಿ ಸ್ವಚ್ಛತೆ ಬಗ್ಗೆ ಕೆಲಸ ಮಾಡುವ ಕಾರ್ಮಿಕರ ಶ್ರಮದ ಬಗ್ಗೆ ಗುಣಗಾನ ಮಾಡಿದರು.
ಜೀವನದಲ್ಲಿ ವೈಫಲ್ಯಗಳಿಲ್ಲದೆ ಯಶಸ್ಸು ಸಿಗಲಾರದು, ವೈಫಲ್ಯಗಳಿಗೆ ಯಾರೂ ಎದೆಗುಂದಬೇಡಿ, ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಬನ್ನಿ ಎಂದು ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಮೊದಲು ಶೌಚಾಲಯ ನಿರ್ಮಾಣ ಮಾಡ ಬೇಕು ಅನಂತರ ದೇವಾಲಯ ಎನ್ನುವ ತಮ್ಮ ಹೇಳಿಕೆ ಭಾರೀ ವಿವಾದವನ್ನೇ ಸೃಷ್ಟಿ ಮಾಡಿತ್ತು. ಆದರೆ, ಹೆಣ್ಣು ಮಕ್ಕಳು ಆತ್ಮ ಗೌರವದಿಂದ ಬದುಕಬೇ ಕಾದರೆ ಶೌಚಾಲಯ ಅಗತ್ಯ. ಏನನ್ನು ತಿನ್ನುತ್ತೇವೆ, ಬಿಡುತ್ತೇವೆ ಎನ್ನುವು ದಕ್ಕಿಂತ ಆತ್ಮಗೌರವ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ವಿಚಾರಧಾರೆಗಳು ಬದಲಾ ಗುವ ಅಗತ್ಯವಿದೆ ಎಂದು ಹೇಳಿದರು.
ದೇಶದ ವಿಶ್ವವಿದ್ಯಾಲಯ ಗಳಲ್ಲಿ ವಿದ್ಯಾರ್ಥಿ ಸಂಗದ ಚುನಾವಣೆಗಳು ನಡೆಯುತ್ತವೆ. ಆದರೆ, ಯಾವೊಂದು ವಿದ್ಯಾರ್ಥಿ ಸಂಘಟನೆಯೂ ಸ್ವಚ್ಛತೆಯ ಬಗ್ಗೆ ಚಳವಳಿಯನ್ನು ನಡೆಸುವುದಿಲ್ಲ. ಇನ್ನು ಮುಂದಾದರೂ ವಿದ್ಯಾರ್ಥಿ ಸಂಘಗಳು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯ ವಿದೆ ಎಂದು ಹೇಳಿದರು.
21ನೇ ಶತಮಾನ ಏಷ್ಯಾದ್ದು: 21ನೇ ಶತಮಾನ ಏಷ್ಯಾ ದೇಶಗಳಾದ ಭಾರತ, ಚೀನಾಗೆ ಸೇರಿದ್ದು ಎಂದು ಹೇಳಿದ ಅವರು, ಕಾಲೇಜುಗಳಲ್ಲಿ ‘ರೋಸ್ ಡೇ’ ಆಚರಿಸಲು ನಮ್ಮದೇನು ವಿರೋಧವಿಲ್ಲ. ಕೇರಳದಲ್ಲಿ ರೋಸ್ ಡೇ, ಪಂಜಾಬ್‍ನಲ್ಲಿ ಸಿಖ್ ಡೇ ಬೇಕಾದರೂ ಆಚರಿಸಿಕೊಳ್ಳಲಿ, ಆದರೆ ಯಾವುದೇ ಆಚರಣೆ ನಮ್ಮ ಸಂಸ್ಕೃತಿಯನ್ನು ಮೀರಿ ನಡೆಯಬಾರದು ಎನ್ನುವ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.
ಆಧುನಿಕ ಕೃಷಿ ಉದ್ಯೋಗಕ್ಕೆ ಒತ್ತು ಸ್ವಾಮಿ ವಿವೇಕಾಂದರು ಆಧುನಿಕ ಕೃಷಿ ಮತ್ತು ಯುವ ಜನರಿಗೆ ಉದ್ಯೋಗ ಸಿಗಬೇಕು ಎಂದು ಬಯಸಿದ್ದರು. ಈ ಕಾರಣಕ್ಕಾಗಿಯೇ ಜೆಮ್‍ಶೆಡ್ ಜಿ ಟಾಟಾ ಅವರಿಗೆ ಉದ್ಯೋಗ ನೀಡುವಂತೆ ಪತ್ರ ಬರೆದಿದ್ದರು ಎನ್ನುವುದನ್ನು ಮೆಲುಕು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಯುವಜನರ ದೇಶ. ಇಲ್ಲಿ ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗದಾತರು ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು.
ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ಅಣ್ಣ- ತಮ್ಮಂದಿರೆ, ಅಕ್ಕ -ತಂಗಿಯರೆ ಎಂದು ಭಾಷಣ ಮಾಡಿದಾಗ ಇಡೀ ಸಭೆ ಬೆರಗಾಗಿತ್ತು. ಆ ಬಳಿಕ ತಮ್ಮ ಭಾಷಣದುದ್ದಕ್ಕೂ ಎಲ್ಲರನ್ನು ಮೋಡಿ ಮಾಡಿದ್ದರು ಎಂದು ಹೇಳಿದ ಅವರು, ಭಾರತದ ತಾಕತ್ತನ್ನು ಪರಿಚಯಿಸಿಕೊಟ್ಟ ಹಿರಿಮೆ ವಿವೇಕಾನಂದರದು ಎಂದು ಹೇಳಿದರು. ಈ ಮುಂಚೆ ಭಾರತದವರನ್ನು ಗುಲಾಮರಂತೆ ನೋಡುತ್ತಿದ್ದರು. ಅದಕ್ಕೆ ಹೊಸ ದಿಕ್ಕು, ದೆಸೆಯನ್ನು ನೀಡಿ ಆತ್ಮವಿಶ್ವಾಸ ಹೆಚ್ಚಿಸಿ ವಿಶ್ವದಲ್ಲಿ ಭಾರತಕ್ಕೆ ಹೊಸದೊಂದು ಗುರುತು ನೀಡಿದ ಖ್ಯಾತಿ ಸ್ವಾಮಿ ವಿವೇಕಾನಂದರದು. ಸಾಮಾಜಿಕ ಸಮಸ್ಯೆಗಳ ವಿರುದ್ಧ ದನಿ ಎತ್ತಿ ಅದರ ವಿರುದ್ಧ ಹೋರಾಡಿದವರು ಎಂದು ಹೇಳಿದರು.
ಶ್ರದ್ಧೆ ಮತ್ತು ಸಹಿಷ್ಣುತತೆಯ ಬಗ್ಗೆ ಒತ್ತಿ ಹೇಳುತ್ತಿದ್ದ ವಿವೇಕಾನಂದರು ಸ್ತ್ರೀಯರನ್ನು ಗೌರವದಿಂದ ಕಾಣಬೇಕು ಎಂದು ಪ್ರತಿಪಾದಿಸುತ್ತಿದ್ದರು. ಅಲ್ಲದೆ, ಜನ ಸೇವೆಯೇ ದೇವರ ಸೇವೆ ಎಂದು ನಂಬಿದ್ದ ಅವರು, ಯುವ ಜನಾಂಗ ದೇಶದ ಶಕ್ತಿ ಎನ್ನುವ ಅಚಲ ನಂಬಿಕೆ ಅವರಲ್ಲಿತ್ತು ಎಂದರು. ವಿವೇಕಾನಂದರ ರೀತಿಯಲ್ಲೇ ರವೀಂದ್ರನಾಥ್ ಠಾಗೂರು, ಮಹಾತ್ಮಗಾಂಧೀಜಿ ಅವರು ಸತ್ಯದ ಹುಡುಕಾಟ ಮಾಡಿದ್ದಾರೆ. ದೇಶವನ್ನು ಜಗತ್ತಿನಲ್ಲಿ ಮುಂಚೂಣಿಯ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು. ಅದೇ ರೀತಿ ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ ಅವರ ಕೊಡುಗೆಗಳನ್ನು ಪ್ರಧಾನಿ ನರೇಂದ್ರಮೋದಿ ಇದೇ ವೇಳೆ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಡಾ. ಮಹೇಶ್ ಶರ್ಮಾ, ವರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಸೇರಿದಂತೆ ಮತ್ತಿತರರು ಇದ್ದರು.

Share this post