ದ್ವಿಚಕ್ರ ವಾಹನ ಯೋಜನೆ ಫಲಾನುಭವಿಗಳ ಆಯ್ಕೆಗೆ ಸಂದರ್ಶನ 6ಕ್ಕೆ

ಬೀದರ, ಮಾ.03: ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆಯಡಿ ವಿಕಲಚೇತನ ಫಲಾನುಭವಿಗಳ ಆಯ್ಕೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾ.6ರ ಬೆಳಗ್ಗೆ 10ಕ್ಕೆ ಮೈಲೂರಿನಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.
ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅಗತ್ಯ ದಾಖಲಾತಿಗಳಾದ ಅಂಗವಿಕಲರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ, ವಾಹನ ಚಾಲನಾ ಪರವಾನಗಿ ಪತ್ರ, ವಿದ್ಯಾರ್ಹತೆಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
2018ರ ಫೆಬ್ರವರಿ 15ರಿಂದ 20ರ ಒಳಗಾಗಿ ಅರ್ಜಿ ಸಲ್ಲಿಸಿದ ಅರ್ಹ ಅರ್ಜಿದಾರರರಿಗೆ ಈಗಾಗಲೇ ಸಂದರ್ಶನ ಪತ್ರ ರವಾನಿಸಲಾಗಿದೆ. ಸಂದರ್ಶನ ಪತ್ರ ತಲುಪದೇ ಇರುವ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದವರು ಮಾತ್ರ ದಾಖಲಾತಿಗಳೊಂದಿಗೆ ಸಂದರ್ಶನ ಸಭೆಗೆ ಹಾಜರಾಗ ಬೇಕು. ತಡವಾಗುವುದು ಅಥವಾ ಗೈರುಹಾಜರಾಗುವುದು ಹಾಗೂ ಮೂಲ ದಾಖಲಾತಿಗಳು ಇಲ್ಲದೆ ಇರುವವರಿಗೆ ಸಂದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this post