ಬೀದರ ವಿಧಾನ ಸಭೆ ಚುನಾವಣೆ ಪೇಜ್ ಪ್ರಮುಖರ ಸಭೆ

ಬೀದರ ವಿಧಾನ ಸಭೆ ಚುನಾವಣೆ ಪೇಜ್ ಪ್ರಮುಖರ ಸಭೆ

ದಿನಾಂಖ 24-03-2018
ಬೀದರ: ಬೀದರ ವಿಧಾನ ಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಘಟನೆಯೂ 19 ಸೂತ್ರಗಳಲ್ಲಿ ಮಹತ್ವದ ಪೇಜ್ ಪ್ರಮುಖರ ಸಭೆಯು ಪೇಜ್ ಪ್ರಮುಖರ ಉಸ್ತುವಾರಿ ಬಾಬುವಾಲಿ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರ ನೇತೃತ್ವದಲ್ಲಿ ನಗರಧ್ಯಕ್ಷ ರಾಜಕುಮಾರ ಚಿದ್ರಿಯವರ ಅಧ್ಯಕ್ಷತೆಯಲ್ಲಿ ನಗರದ ಪಾಪನಾಶ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾರೆ ಆಗಲಿ ಪಕ್ಷದ (ಬಿ) ಫಾರಂ ಕೈಗೆ ಸಿಕ್ಕಿದರೆ ಶಾಸಕರಾಗುವುದು ಖಂಡಿತ ಎಂಬ ವಿಶ್ವಾಸ ಬರುವುದು ಬುತ್ ಗಟ್ಟೆ ಇದ್ದಾಗ ಬುತ್‍ನಲ್ಲಿ ಸಕ್ರೀಯವಾಗಿ ಪೇಜ್ ಪ್ರಮುಖರ ಅಭ್ಯರ್ಥಿಗಳಿಗಾಗಿ ಅಲ್ಲ ಬಿಜೆಪಿಗೆ ಗೆಲ್ಲಿಸುವ ಪೇಜ್ ಪ್ರಮುಖರು ಇದಾಗ, ಅದನ್ನು ನೇಮಿಸುವು ಬೂತ್ ಪ್ರಮುಖರ ಜವಆಬ್ದಾರಿ. ಬೂತ್ ಪ್ರಮುಖರು 3 ದಿನಗಳಲ್ಲಿ ಸಭೆ ಸೇರಿ ಪೇಜ್ ಪ್ರಮುಖರ ಪಟ್ಟಿ ಸಿದ್ದ ಪಡಿಸಿ ನಮಗೆ ನೀಡಬೇಕೆಂದು ಬಾಬುವಾಲಿ ಕರೆ ನೀಡಿ, ಕಾಂಗ್ರೆಸ್ ಮುಕ್ತ ಕರ್ನಾಟಕ ಸಂಕಲ್ಪ ತೊಟ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರಾಜ್ಯ ಅಧ್ಯಕ್ಷರಾದ ಯಡಿಯೂರಪ್ಪನವರ ಸಂಕಲ್ಪ ಪೂರ್ಣ ಮಾಡುವ ಹೊಣೆ ಬೂತ ಮಟ್ಟದ ಕಾರ್ಯಕರ್ತರ ಮೇಲಿದೆ. ಈ ಬಾರಿ ಬೀದರ ವಿಧಾನ ಸಭೆ ಕ್ಷೇತ್ರ ಕಾಂಗ್ರೆಸ್ ಮುಕ್ತವಾಗಬೇಕೆಂದು ಪಣ ತೋಡಬೇಕೆಂದು ಬಾಬುವಾಲಿ ಕರೆ ಕೊಟ್ಟರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಸಿಂಗ್ ಠಾಕೂರ ಮಾತನಾಡಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ್ ಕಾರಬರಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ ಪಾಲಂ ರವೀಂದ್ರ ಸ್ವಾಮಿ, ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶಿವಪುತ್ರ ವೈಧ್ಯ, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಮಡಿವಾಳ, ರೌಫೋದ್ದಿನ ಕಛೇರಿವಾಲ, ನಗರ ಸಭೆ ಸದಸ್ಯರಾದ ರಾಜರಾಮ ಚಿಟ್ಟಾ, ನಾಗಶೆಟ್ಟಿ ವರವಟೆ, ಹಣಮಂತ ಬುಳ್ಳಾ, ಪ್ರಸನ್ನ ಲಕ್ಷಿ ದೇಶಪಾಂಡೆ, ರಾಜು ಬಿರಾದರ, ಬಸವರಾಜ ಜೋಜ್ನಾ, ಕಿರಣ ಪಾಲಂ, ಭೂಷಣ ಪಾಟಕ್, ಅರುಣ ಕುಮಾರ, ನರೇಶ ಗೌಳಿ, ಸಂಗಮೇಶ ರಾಮಶೆಟ್ಟಿ, ಸಂತೋಷ ಲಾಕಾ, ಹಣಮಂತ ಕೊಂಡಿ, ರಾಜಕುಮಾರ ಪಾಟೀಲ ಶ್ರೀಮಂಡಲ್ ಮತ್ತು ರಾಜು ಘಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಭಾರತ ಮಾತೆಗೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ರಾಜು ಚಿದ್ರಿ ಸ್ವಾಗತಿಸಿದ್ದರು. ಹಣಮಂತ ಬುಳ್ಳಾ ನಿರೂಪಿಸಿದರು, ಮತ್ತು ಅರವಿಂದ ಪಾಟೀಲ್ ವಂದಿಸಿದರು.

Share this post