ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

ಪತ್ರಿಕಾ ಪ್ರಕಟಣೆಯ ಕೃಪೆಗಾಗಿ
ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

ಬೀದರ; ನಗರದ ಕೆ.ಪಿ. ವಿದ್ಯಾಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಬಾಬುವಾಲಿ ಅವರು ಧ್ವಜಾರೋಹಣ ಮಾಡುವುದುರ ಮುಖಾಂತರ ನೆರವೇರಿಸಿಕೊಟ್ಟರು.

ನಂತರ ಮಾತನಾಡಿದ ಅವರು ದೇಶದ ಪ್ರತಿ ವಿದ್ಯಾರ್ಥಿಯೂ ಈ ದೇಶಕ್ಕಾಗಿ ದುಡಿದ ವೀರ ಯೋಧರ ಬಗ್ಗೆ ತಿಳಿಯಬೇಕು, ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳಬೇಕು. ಇಂದಿನ ಮಕ್ಕಳು ನಟ ನಟಿಯರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿರುವುದು ದುರ್ಗತಿಯ ಸಂಗತಿ. ದೇಶಕ್ಕಾಗಿ ತನ್ನ ಪ್ರಾಣವನ್ನು ನೀಡುತ್ತಿರುವ ವೀರ ಯೋಧರ ಬಗ್ಗೆ ತಿಳಿಯಬೇಕು, ನಾವು ಈ ದೇಶಕ್ಕೆ ಏನು ನೀಡಿದ್ದೇವೆ ಎಂಬುವುದುರ ಬಗ್ಗೆ ಅರಿತು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹಿತ ನುಡಿಗಳನ್ನು ನುಡಿದರು.
ಇಂದಿನ ಮಕ್ಕಳು ಬರೀ ಇಂಜಿನಿಯರ್, ಡಾಕ್ಟರ್ ಮತ್ತು ಇನ್ನಿತರ ಉನ್ನತ ಹುದ್ದೆಗಳತ್ತ ಹೆಚ್ಚು ಇಚ್ಚಿಸುತ್ತಿರುವುದು ಅಷ್ಟೇ ಅಲ್ಲದೇ ದೇಶದ ಸೈನ್ಯದಲ್ಲಿ ಸೇರಿ ದೇಶ ಸೇವೆ ಮಾಡಬೇಕು ಎಂದು ದೇಶಭಕ್ತಿಯ ಹಿತ ನುಡಿಗಳನ್ನು ನುಡಿದರು.
ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಅನೇಕ ಸಾಂಸ್ಕøತಿಕ ಮತ್ತು ದೇಶಭಕ್ತಿ ನೃತ್ಯಗಳನ್ನು ಮಕ್ಕಳು ನಡೆಸಿಕೊಟ್ಟರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಮಲ್ಲಯ್ಯ ಸ್ವಾಮಿ, ಗೌರವನ್ವಿತ ಸದಸ್ಯರಾದ ಚಂದ್ರಶೇಖರ ಪಾಟೀಲ, ಪ್ರೌಢ ಶಾಲೆಯ ಮುಖ್ಯ ಗುರುಗಳಾದ ವಿಜಯಕುಮಾರ ಪಾಟೀಲ ಯರನಳ್ಳಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸುಲೋಚನಾ ಪಾಟೀಲ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಗುರು ಪಾಟೀಲ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ನಿರೂಪಣೆಯನ್ನು ಪ್ರಭಾವತಿ ಭೆದ್ರೆ ನಡೆಸಿಕೊಟ್ಟರು.

Share this post