ಗಣೇಶ ಮಹಾ ಮಂಡಲ ವತಿಯಿಂದ ಲಾಂಛನ ಮತ್ತು ಬಾಲಗಂಗಾಧರ ತಿಲಕರ, ಸರದಾರ ವಲ್ಲಭಾಯಿ ಪಟೇಲರ ಭಾವಚಿತ್ರ ಅನಾವರಣ

ಗಣೇಶ ಮಹಾ ಮಂಡಲ ವತಿಯಿಂದ ಲಾಂಛನ ಮತ್ತು ಬಾಲಗಂಗಾಧರ ತಿಲಕರ, ಸರದಾರ ವಲ್ಲಭಾಯಿ ಪಟೇಲರ ಭಾವಚಿತ್ರ ಅನಾವರಣ

ಬೀದರ 15: ಗಣೇಶ ಮಹಾ ಮಂಡಲ ಬೀದರ ವತಿಯಿಂದ 2018 ಸಾಲಿನ ಲೋಗೊ ಮತ್ತು ಎಲ್ಲ ಗಣೇಶ ಮಂಡಳಿಗಳಿಗೆ ವಿತರಿಸಲು ಬಾಲಗಂಗಾಧರ ತಿಲಕರ ಹಾಗೂ ಸರದಾರ ವಲ್ಲಭಾಯಿ ಪಟೇಲರ ಭಾವಚಿತ್ರಗಳನ್ನು ನಗರದ ರಾಮ ಮಂದಿರದಲ್ಲಿ ಅನಾವರಣಗೊಳಿಸಲಾಯಿತು.
ಗಣೇಶ ಮಹಾ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಗಾದಗಿ ಪ್ರಧಾನ ಕಾರ್ಯದರ್ಶಿಯಾದ ಬಾಬುವಾಲಿ ನಂದಕಿಶೋರ ವರ್ಮಾ, ರಜನಿಶ ವಾಲಿ ರಾಜಕುಮಾರ ಚಿದ್ರಿ, ಸತೀಶ ಮೊಟ್ಟಿ, ಮನೋಹರ ದಂಡೆ, ಸುಭಾಷ ಚೋಳಕರ್, ಮುನ್ನಾ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ನಗರದಲ್ಲಿ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಿದು ಸಾರ್ವಜನಿಕರು ಭಕ್ತಿ ಭಾವದಿಂದ ಸಂಧರ್ಭದಲ್ಲಿ ಹಬ್ಬ ಆಚರಿಸುತ್ತಿದ್ದಾರೆ. 17 ರಂದು ನಡೆಯಲಿರುವ ವಿಸರ್ಜನೆಯಲ್ಲಿ ಹೆಚ್ಚು ಗಣಪತಿಗಳು ಸಮಯಕ್ಕೆ ಸರಿಯಾಗಿ ಬಂದು ಯಶಸ್ವಿಗೊಳಿಸಬೇಕೆಂದು ಗಣೇಶ ಮಹಾ ಮಂಡಳಿ ಕೇಳಿಕೊಳ್ಳುತ್ತಿದೆ. ರಜನೀಶ ವಾಲಿಯವರು ತಮ್ಮ ವಾಲಿ ಶ್ರೀ ಆಸ್ಪತ್ರೆಯಿಂದ ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗೆ ವಿತರಿಸುವ ಸರದಾರ ವಲಭಾಯಿ ಪಟೇಲರ ಮತ್ತು ಬಾಲಗಂಗಾಧರ ತೀಲಕರ ಭಾವಚಿತ್ರದ ಪ್ರಾಯೋಜನೆ ಮಾಡಿದ್ದಾರೆ, ಎಂದು ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತಿಳಿಸಿದ್ದಾರೆ.

Share this post