ಅಯೋಧ್ಯೆ | ಬಾಲರಾಮನ ದರ್ಶನ ಪಡೆದ ಅರವಿಂದ ಕೇಜ್ರಿವಾಲ್, ಭಗವಂತ ಮಾನ್‌ ಕುಟುಂಬ

ಅಯೋಧ್ಯೆ | ಬಾಲರಾಮನ ದರ್ಶನ ಪಡೆದ ಅರವಿಂದ ಕೇಜ್ರಿವಾಲ್, ಭಗವಂತ ಮಾನ್‌ ಕುಟುಂಬ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯ ಬಾಲರಾಮನ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತಮ್ಮ ಭೇಟಿ ಕುರಿತು ಮಾತನಾಡಿರುವ ಕೇಜ್ರಿವಾಲ್, ‘ಬಾಲರಾಮನ ದರ್ಶನ ಪಡೆದಿದ್ದು ನನ್ನ ಅದೃಷ್ಟವೇ ಸರಿ. ದೇವಾಲಯಕ್ಕೆ ಭೇಟಿ ನೀಡಿದ ನಂತರ ಮನಸ್ಸಿಗೆ ಶಾಂತಿ ಲಭಿಸಿತು. ನನಗಾದ ಆನಂದವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಭವ್ಯ ಹಾಗೂ ಸುಂದರವಾದ ದೇಗುಲ ನಿರ್ಮಾಣವಾಗಿದ್ದು ಇಡೀ ಜಗತ್ತಿಗೇ ಶುಭ ಸಂಕೇತ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ರಾಮನ ಭಕ್ತರು ದೇಗುಲಕ್ಕೆ ಭೇಟಿ ನೀಡಲು ಅವಕಾಶವಾಗಲಿದೆ. ಎಲ್ಲರ ಸುಖ, ಶಾಂತಿ ಹಾಗೂ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇವೆ’ ಎಂದಿದ್ದಾರೆ.

ಎಎಪಿ ಮುಖಂಡರು ತಮ್ಮ ಕುಟುಂಬ ಸಮೇತರಾಗಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿದರು. ದೇವಾಲಯದ ಆವರಣದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರು.

Share this post

Post Comment