ಮಕ್ಕಳ ಕೈಗೆ ವಾಹನ: ₹ 1.50 ಲಕ್ಷ ದಂಡ ಕಟ್ಟಿದ ಪೋಷಕರು

ಮಕ್ಕಳ ಕೈಗೆ ವಾಹನ: ₹ 1.50 ಲಕ್ಷ ದಂಡ ಕಟ್ಟಿದ ಪೋಷಕರು

ಬೆಂಗಳೂರು: ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಟ್ಟು ಅಪಘಾತ ಉಂಟಾಗಲು ಕಾರಣವಾಗಿದ್ದ 6 ಪೋಷಕರು, ತಮ್ಮ ತಪ್ಪು ಒಪ್ಪಿಕೊಂಡು ನ್ಯಾಯಾಲಯಕ್ಕೆ ₹ 1.50 ಲಕ್ಷ ದಂಡ ಕಟ್ಟಿದ್ದಾರೆ.

‘ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ 2022–23ನೇ ಸಾಲಿನಲ್ಲಿ ದಾಖಲಾಗಿದ್ದ 6 ಅಪಘಾತ ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದ ಪೋಷಕರಿಗೆ ನ್ಯಾಯಾಲಯ ದಂಡ ವಿಧಿಸಿದೆ’ ಎಂದು ಸಂಚಾರ ವಿಭಾಗದ (ಪಶ್ಚಿಮ) ಡಿಸಿಪಿ ಅನಿತಾ ಹದ್ದಣ್ಣನವರ ತಿಳಿಸಿದ್ದಾರೆ.

‘ಪೋಷಕರ ವಾಹನ ಚಲಾಯಿಸಿದ್ದ ಬಾಲಕರು, ಅಪಘಾತವನ್ನುಂಟು ಮಾಡಿದ್ದರು. ಮಕ್ಕಳ ಜೊತೆಯಲ್ಲಿ ಪೋಷಕರನ್ನೂ ಆರೋಪಿಗಳನ್ನಾಗಿ ಮಾಡಲಾಗಿತ್ತು. ಇಂಥ ಪ್ರಕರಣಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ. ತಪ್ಪು ಒಪ್ಪಿಕೊಂಡು 6 ಪೋಷಕರು, ತಲಾ ₹ 25 ಸಾವಿರ ಪಾವತಿಸಿದ್ದಾರೆ’ ಎಂದು ಹೇಳಿದ್ದಾರೆ.

Share this post

Post Comment