ಪ್ರೀತಂ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಪ್ರೀತಂ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಹಾಸನದಲ್ಲಿ ಮೈತ್ರಿ ಪಕ್ಷಗಳ ನಾಯಕರ ಜಟಾಪಟಿ.

‘ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರಿಗೆ ಇನ್ನೂ ಸಣ್ಣ ವಯಸ್ಸು. ಪಾಪ ಬಿರುಸಿನಲ್ಲಿ ಮಾತಾಡುತ್ತಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‌‘ಲೋಕಸಭೆ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಗೆ ಅವಕಾಶ ನೀಡಬೇಕು’ ಎಂಬ ಪ್ರೀತಂ ಹೇಳಿಕೆಗೆ ತಾಲ್ಲೂಕಿನ ಚನ್ನಂಗಿಹಳ್ಳಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಆತನೂ ಒಬ್ಬ ನಮ್ಮ ತಮ್ಮ ಅಲ್ವೆ? ಕುಳಿತು ಸರಿ ಮಾಡೋಣ’ ಎಂದರು.

‘ಅವರನ್ನೇ ಕಣಕ್ಕಿಳಿಸಬೇಕೆಂದರೆ ಕಣಕ್ಕಿಳಿಸೋಣ. ಸ್ಪರ್ಧಿಸುವ ಆಸೆ ಅವರಿಗಿದ್ದರೆ ಚರ್ಚಿಸೋಣ. ನಾವು–ಅವರು ಅಣ್ಣ-ತಮ್ಮಂದಿರಂತೆ ಹೋಗಬೇಕಲ್ವಾ? ಯಾರ‍್ಯಾರೋ ಏನೇನೋ ಮಾತನಾಡುತ್ತಾರೆ. ಪಾಪ, ಅದಕ್ಕೆ ಅವರು ಪ್ರತಿಕ್ರಿಯಿಸುತ್ತಾರೆ. ಕುಳಿತು ಸರಿ ಮಾಡೋಣ, ಅದೇನೂ ಸಮಸ್ಯೆ ಅಲ್ಲ’ ಎಂದು ಹೇಳಿದರು.

Share this post

Post Comment